- ಕರ್ನಾಟಕ ಸರ್ಕಾರದ ಉದ್ಯೋಗ ಆಕಾಂಕ್ಷಿಗಳು ನೀವಾಗಿದ್ದು, 2024ನೇ ಸಾಲಿನಲ್ಲಿ ವಿವಿಧ ನೇಮಕ ಅಧಿಸೂಚನೆಗಳ ಹುದ್ದೆಗಳಿಗೆ ಅರ್ಜಿ ಹಾಕಿದ್ದಲ್ಲಿ, ತಪ್ಪದೇ ಈ ಮಾಹಿತಿ ಓದಿಕೊಳ್ಳಿ. ಹಾಗೂ ಕೆಪಿಎಸ್‌ಸಿ ತಿಳಿಸಿದಂತೆ ಕನ್ನಡ ಭಾಷಾ ವಿವರಗಳನ್ನು ತಮ್ಮ ಲಾಗಿನ್‌ನಲ್ಲಿ ನವೀಕರಿಸಲು ಮರೆಯದಿರಿ. 2025 ರ ಮೇ 21 ರೊಳಗೆ ಈ ನವೀಕರಣಕ್ಕೆ ಗಡುವು ನೀಡಲಾಗಿದೆ. ಈ ಕುರಿತ ಲೇಟೆಸ್ಟ್ ಅಪ್‌ಡೇಟ್ ಇಲ್ಲಿದೆ ನೋಡಿ.
ಹೈಲೈಟ್ಸ್:
- ಕೆಪಿಎಸ್‌ಸಿ ಇಂದ ಮಹತ್ವದ ಸೂಚನೆ.
- 2024ನೇ ಸಾಲಿನ ನೇಮಕಾತಿ ಹುದ್ದೆಗಳಿಗೆ ಅರ್ಜಿ ಹಾಕಿರುವವರು ಚೆಕ್ ಮಾಡಲೇಬೇಕು.
- ಕನ್ನಡ ಭಾಷಾ ವಿವರಗಳನ್ನು ನವೀಕರಿಸಲು ಮೇ 21 ಗಡುವು
ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನಲ್ಲಿ ಅಧಿಸೂಚಿಸಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧ, ಸದರಿ ಹುದ್ದೆಗಳಿಗೆ ಅರ್ಜಿ ಹಾಕಿರುವವರಿಗೆ ಮಹತ್ವದ ಸೂಚನೆಯನ್ನು ಪ್ರಕಟಿಸಿದೆ.
ಕನ್ನಡ ಭಾಷೆಯ ವಿವರಗಳನ್ನು ನೀಡಲು ಕೊನೆ ದಿನಾಂಕ: 21-05-2025
ಕನ್ನಡ ಭಾಷೆಯ ವಿವರಗಳನ್ನು ನೀಡುವ ವಿಧಾನ
- ಕೆಪಿಎಸ್‌ಸಿ ಅಭ್ಯರ್ಥಿ ಲಾಗಿನ್ ಪೋರ್ಟಲ್ https://kpsconline.karnataka.gov.in/login/login ಗೆ ಭೇಟಿ ನೀಡಿ.
- ಓಪನ್ ಆದ ಪೇಜ್‌ನಲ್ಲಿ ರಿಜಿಸ್ಟ್ರೇಷನ್ ನಂಬರ್ / ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ.
- ವೈಯಕ್ತಿಕ ವಿವರಗಳ ಟ್ಯಾಬ್ ಆಯ್ಕೆ ಮಾಡಿ.
- ನಂತರ ಕನ್ನಡ ಭಾಷಾ ಪರೀಕ್ಷೆಯ ಟ್ಯಾಬ್ ಆಯ್ಕೆ ಮಾಡಿ.
- ಕನ್ನಡ ಭಾಷೆಯ ವಿವರಗಳನ್ನು ನೀಡಿ. ಸಬ್ಮಿಟ್ ಮಾಡಿ.
ಈಗಲೇ ಈ ಕೆಳಗಿನಂ ಎಲ್ಲ ಹುದ್ದೆಗಳಿಗೆ ಅರ್ಜಿ ಹಾಕಿರುವವರು ಕನ್ನಡ ಭಾಷೆಯ ವಿವರಗಳನ್ನು ನಮೂದಿಸಬೇಕು ಎಂದು ಸೂಚಿಸಲಾಗಿದೆ.
ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ (ಆರ್‌ಪಿಸಿ) ಹುದ್ದೆಗಳು : 672
ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ( ಹೈದೆರಾಬಾದ್ ಕರ್ನಾಟಕ ) ಹುದ್ದೆಗಳು : 273
ಪದವಿ ಮಟ್ಟದ ಗ್ರೂಪ್ ಸಿ ಹುದ್ದೆಗಳು (ಹೈದೆರಾಬಾದ್ ಕರ್ನಾಟಕ ) : 16
ಪದವಿ ಮಟ್ಟದ ಗ್ರೂಪ್ ಸಿ ಹುದ್ದೆಗಳು ( ಉಳಿಕೆ ಮೂಲ ವೃಂದ ): 60
ಕೆಪಿಎಸ್‌ಸಿ’ಯ ಈ ಸೂಚನೆ ಏಕೆ?
ಕರ್ನಾಟಕದ ಯಾವುದೇ ಸರ್ಕಾರಿ ಹುದ್ದೆಗೆ ನೇರ ನೇಮಕಾತಿ ಮಾಡುತ್ತಿದ್ದಲ್ಲಿ, ಅಂತಹ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕಡ್ಡಾಯವಾಗಿರುತ್ತದೆ, ಇದರ ಭಾಗವಾಗಿ ಕನ್ನಡ ಭಾಷಾ ಪತ್ರಿಕೆಯು ಇರುತ್ತದೆ. ಆದರೆ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಥವಾ ರಾಜ್ಯ ಸರ್ಕಾರವು ಅದಕ್ಕೆ ತತ್ಸಮಾನವೆಂದು ಘೋಷಿಸಿದ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್‌ಎಸ್‌ಎಲ್‌ಸಿ ಗಿಂತ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಸಿಸಿದ್ದರೆ ಅಥವಾ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಇಂತಹ ಪರೀಕ್ಷೆಗಳನ್ನು ಪಾಸು ಮಾಡಿದ್ದರೆ ಅಥವಾ ಆಯೋಗ ಅಥವಾ ಇನ್ನಿತರೆ ಯಾವುದೇ ಆಯ್ಕೆ ಪ್ರಾಧಿಕಾರವು ಈ ಹಿಂದೆ ನಡೆಸಿದ ಕನ್ನಡ ಭಾಷೆಯ ಪರೀಕ್ಷೆಯಲ್ಲಿ (ಕಡ್ಡಾಯ ಕನ್ನಡ ಪರೀಕ್ಷೆ) ಉತ್ತೀರ್ಣರಾಗಿದ್ದರೆ ಅಂತಹ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.
ಆದ್ದರಿಂದ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಹಾಕಿರುವವರಿಗೆ ಮತ್ತು ಒಟಿಆರ್ ರಿಜಿಸ್ಟ್ರೇಷನ್ ಪಡೆದಿರುವವರಿಗೆ ಕನ್ನಡ ಭಾಷಾ ಪರೀಕ್ಷೆ ವಿನಾಯಿತಿ ನೀಡುವ ಸಲುವಾಗಿ ಹಾಗೂ ಅರ್ಹರಲ್ಲದವರಿಗೆ ಪರೀಕ್ಷೆ ನಡೆಸುವ ಸಲುವಾಗಿ ವಿವರಗಳನ್ನು ನವೀಕರಿಸಲು ಸೂಚಿಸಿದ.